ಮಾನ್ವಿ : ಅಳಿವಿನ ಅಂಚಿನಲ್ಲಿರುವ ಗುಬ್ಬಚ್ಚಿಗಳ ರಕ್ಷಣೆ ಮಾಡುವುದು ನಾವೆಲ್ಲರ ಹೊಣೆಯಾಗಿದ್ದು ಗುಬ್ಬಚ್ಚಿಗಳ ಉಳಿವಿಗೆ ಅರಿವು ಅಗತ್ಯವಾಗಿದೆ ಎಂದು ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ರಾಜೇಶನಾಯಕ ಹೇಳಿದರು.
ಪಟ್ಟಣದ ನೇತಾಜಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗುಬ್ಬಚ್ಚಿ ಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪರಿಸರ ಸಂರಕ್ಷಣೆಯಿಂದ ಉತ್ತಮ ವಾತಾವರಣ ಜೊತೆಗೆ ಮರಗಿಡಗಳ ನಾಶದಿಂದ ಹವಾಮಾನ ವೈಪರಿತ್ಯ ಆಗುವುದರ ಜೊತೆಗೆ ಗುಬ್ಬಚ್ಚಿಯಂತಹ ಪಕ್ಷಿಗಳಿಗೆ ಆಶ್ರಯವಿಲ್ಲದಂತಾಗುತ್ತದೆ ಎಂದರು. ಪಕ್ಷಿಪ್ರೇಮಿಸಲ್ಲಾವುದ್ದೀನ್ ತಮ್ಮ ಮನೆಯಲ್ಲಿ ಗುಬ್ಬಚ್ಚಿಗಳಿಗೆ ಆಶ್ರಯ ನೀಡಿದ್ದಾರೆ ಆನೇಕ ಪಕ್ಷಿಗಳಿಗೆ ಜೀವ ರಕ್ಷಣೆ ನೀಡುವ ಜೊತೆಗೆ ಉಚಿತವಾಗಿ ಪಕ್ಷಿಗಳಿಗಾಗಿ ನೀರಿನ ಆರವಟ್ಟಿಗೆ ತಯಾರಿಸಿ ಉಚಿತವಾಗಿ ನೀಡುವ ಕಾರ್ಯ ಶ್ಲಾಘನೀಯ ಎಂದರು.
ಪರಿಸರ ಪ್ರೇಮಿ ರಾಜಾ ವಸಂತನಾಯಕ ಮಾತನಾಡಿ ಒಳ್ಳೆಯ ಕಾರ್ಯಗಳಿಗೆ ಟೀಕೆಗಳು ಸಾಮಾನ್ಯ ಅವುಗಳಿಗೆ ಕಿವಿಗೊಡಬಾರದು ಕಳೆದ 6-7 ವರ್ಷಗಳಿಂದ ವರ್ಷ 5 ಸಾವಿರಕ್ಕೂ ಹೆಚ್ಚು ಸಸಿಗಳನ್ನು ವಿತರಣೆ ಮಾಡುತ್ತಿದ್ದು ಅನೇಕರು ಗಿಡಗಳನ್ನು ರಕ್ಷಣೆ ಮಾಡಿದ್ದಾರೆ ಪರಿಸರ ಕಾಳಜಿ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಆಕ್ಸಿಜನ್ ಟ್ಯಾಂಕ್‌ಗಳನ್ನು ಬೆನ್ನಿಗೆ ಕಟ್ಟಿಕೊಂಡು ತಿರುಗಾಡು ಪರಸ್ಥತಿ ಬರಲಿದೆ ಅದರಿಂದ ಪರಿಸರ ಸಂರಕ್ಷಣೆ ಮಾಡುವುದು ನಮ್ಮೇಲ್ಲರ ಜವಬ್ದಾರಿ ಎಂದರು.
ನೇತಾಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಈ.ನರಸಿಂಹ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಪಕ್ಷಿಗಳ ರಕ್ಷಣೆ ಮತ್ತು ವಾಟರ್ ಫೀಡಳನ್ನು ತಯಾರಿಸುವ ವಿಧಾನವನ್ನು ಹೇಳಿಕೊಟ್ಟರು
ಈ ವೇಳೆ ನೇತಾಜಿ ಶಾಲೆಯ ಕಾರ್ಯದರ್ಶಿ ಕೆ.ವಿಜಯಲಕ್ಷ್ಮೀ, ಪಕ್ಷಿ ಪ್ರೇಮಿ ಸಲ್ಲವುದ್ದೀನ, ಜಗನ್ನಾಥ ಚೌಧರಿ, ಗೋಪಾಲ ನಾಯಕ ಜೂಕೂರು, ಮಹಿಬೂಬು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Comments are closed.