ಮಾನ್ವಿ : ಅಸಂಘಟಿತ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಧಾನಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ ಹಾಗೂ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಸೌಲಭ್ಯಗಳನ್ನು ಪಡೆಯಲು ಅಸಂಘಟಿತ ಕಾರ್ಮಿಕರು ಮುಂದಾಗಬೇಕೆಂದು ಜಿಲ್ಲಾ ಕಾರ್ಮಿಕ ಅಧಿಕಾರಿ ನಾಜಿಯಾ ಸುಲ್ತಾನ್ ಹೇಳಿದರು,
ಪಟ್ಟಣದ ಪಂಪಾ ಕಾಂಪ್ಲೆಕ್ಸ್ ಹಿಂಭಾಗದ ಕಛೇರಿಯಲ್ಲಿ ತಾಲೂಕ ಸಿಐಟಿಯು ಮತ್ತು ಕರ್ನಾಟಕ ಸ್ಟೇಟ್ ಟೇಲರ್ ಅಸೋಸಿಯೇಷನ್ ಸಂಯುಕ್ತ ಅಶ್ರಯದಲ್ಲಿ ಏರ್ಪಡಿಸಿದ್ದ ಸ್ಮಾರ್ಟ್ ಕಾರ್ಡ್ ವಿತರಣೆ ಮತ್ತು ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ ಯೋಜನೆಯ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ ಕೇಂದ್ರ ಸರ್ಕಾರದ ತುಂಬಾ ಮಹತ್ವಾಕಾಂಕ್ಷೆಯ ಯೋಜನೆಗಳಾದ ಪ್ರಧಾನಮಂತ್ರಿ ಶ್ರಮಯೋಗಿ ಮಾನಧನ್ ಯೋಜನೆ ಹಾಗೂ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತೆ ಯೋಜನೆಯನ್ನು 18 ರಿಂದ 40 ವರ್ಷ ವಯಸ್ಸಿನ ಆಸಂಘಟಿತ ಕಾರ್ಮಿಕರಾದ ಚಿಂದಿ ಹಾಯುವವರು, ಟೇಲರ್, ಆಟೋ, ವಾಹನ ಚಾಲಕರು, ಕೀನರ್ ನಿರ್ವಾಹಕರು, ಕಟ್ಟಡ ಕಾರ್ಮಿಕರು, ಕೃಷಿ ಕಾರ್ಮಿಕರು ಸೇರಿದಂತೆ 11 ವಲಯ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ಶುಲ್ಕದೊಂದಿಗೆ ನೋಂದಣಿ ಹಾಗೂ ಮಾಶಾಸನ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದರು,
ಅಂಬೇಡ್ಕರ್ ಸಹಾಯ ಹಸ್ತ ಯೋಜನೆಯಡಿ ಕಟ್ಟಡ ಕಾರ್ಮಿಕರು ಪಡೆಯುವ ಸವಲತ್ತುಗಳು ಮತ್ತು ನೋದಣೆ ಮಾಡಿಸಲು ಅನುಸರಿಸಬಹುದಾದ ನಿಯಮಗಳ ಬಗ್ಗೆ ನಾಜಿಯಾ ಸುಲ್ತಾನ್ ಸಮರ್ಪಕವಾಗಿ ಮಾಹಿತಿಯನ್ನು ನೀಡಿದರು.
ಸಿಐಟಿಯು ತಾಲೂಕಾಧ್ಯಕ್ಷ ಹೆಚ್.ಶರ್ಫುದ್ದೀನ್ ಪೋತ್ನಾಳ ಮಾತನಾಡಿ ಅಸಂಘಟಿತ ಕಾರ್ಮಿಕರಿಗೆ ಸರ್ಕಾರದ ಯೋಜನೆಗಳನ್ನು ದೊರಕಿಸುವುದು ಹಾಗೂ ಕಾರ್ಮಿಕರ ಹಕ್ಕುಗಳಿಗಾಗಿ ಸಿಐಟಿಯು ನಿರಂತರ ಶ್ರಮಿಸುವುದರ ಜೊತೆಗೆ ರಾಜ್ಯ-ಕೇಂದ್ರ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವುದರ ಮೂಲಕ ಕಾರ್ಮಿಕರ ಹಿತ ಕಾಪಾಡಲಾಗುತ್ತದೆ ಎಂದರು.
ಜಿಲ್ಲೆಯ ಜಿಲ್ಲಾ ಕಾರ್ಮಿಕ ಅಧಿಕಾರಿಯಾಗಿ ಬಂದಿರುವ ನಾಜಿಯಾ ಸುಲ್ತಾನ್ ಅವರು ಕಚೇರಿಗೆ ಸೀಮಿತವಾಗದೆ ಕಾರ್ಮಿಕರ ಸಂಕಷ್ಟಗಳಿಗೆ ಸ್ಪಂದಿಸುವುದು ಹಾಗೂ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಿ ಯೋಜನೆಗಳನ್ನು ಅಸಂಘಟಿತ ಕಾರ್ಮಿಕರಿಗೆ ತಲುಪಿಸುವ ಕಾರ್ಯದಲ್ಲಿ ನಿರತರಾಗಿರುವುದು ತುಂಬಾ ಶ್ಲಾಘನೀಯ ಕಾರ್ಯ ಎಂದು ಹೆಚ್. ಶರ್ಫುದ್ದೀನ್ ಪೋತ್ನಾಳ ಪ್ರಶಂಸೆ ವ್ಯಕ್ತಪಡಿಸಿದರು.
ಈ ವೇಳೆ ಟೇಲರ್ ಅಸೋಸಿಯೇಷನ್ ತಾಲೂಕ ಅಧ್ಯಕ್ಷ ಹುಸೇನ್ ಭಾಷ, ಕಾರ್ಯದರ್ಶಿ ಡಿ.ವಿರೇಶ, ಈರಣ್ಣ ಮರ್ಲಟ್ಟಿ,ಅನ್ನಪೂರ್ಣಮ್ಮ, ಮಹ್ಮದ್ ರಿಯಾಜ್, ಸೊಹೈಲ್, ಸಲೀಂ, ಮಹಬೂಬ್ ರೋಷನಿ ಸೇರಿದಂತೆ ಅನೇಕ ಟೇಲರ್ಸಗಳು, ಅಸಂಘಟಿತ ಕಾರ್ಮಿಕರು ಇದ್ದರು.
|
|
Comments are closed.