Shubhashaya News

ಕರ್ನಾಟಕ ರಾಜ್ಯ ಸಾವಿತ್ರಿ ಬಾ ಫುಲೆ ಶಿಕ್ಷಕಿಯರ ಸಂಘದಿಂದ ವಿಶ್ವ ಮಹಿಳಾ ದಿನಾಚರಣೆ ಮತ್ತು ಸನ್ಮಾನ ಸಮಾರಂಭ

ಆಧುನಿಕ ಮಹಿಳೆ ಸರ್ವಶಕ್ತಳು: ವಿಜಯಲಕ್ಷ್ಮಿ

ಮಾನ್ವಿ: ಆಧುನಿಕ ಸಾಮಾಜಿಕ ಬದುಕಿನಲ್ಲಿ ಕೌಟುಂಬಿಕ, ಮಕ್ಕಳ ಪಾಲನೆ, ಉದ್ಯೋಗ, ದೌರ್ಜನ್ಯಗಳನ್ನು ಸಶಕ್ತವಾಗಿ ಎದುರಿಸುವ ಮೂಲಕ ಮಹಿಳೆ ಇಂದು ಸರ್ವಶಕ್ತಳಾಗಿ ಬೆಳೆಯುತ್ತಿದ್ದಾಳೆ ಎಂದು ವಕೀಲರಾದ ವಿಜಯಲಕ್ಷ್ಮಿ ಎಂ.ಹೊಸಮನಿ ಹೇಳಿದರು.
ರವಿವಾರ ಪಟ್ಟಣದ ಎಪಿಎಂಸಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯಸಾವಿತ್ರಿ ಬಾ ಫುಲೆ ಶಿಕ್ಷಕಿಯರ ಸಂಘದಿಂದ ಹಮ್ಮಿಕೊಂಡಿದ್ದ ವಿಶ್ವಮಹಿಳಾ ದಿನಾಚರಣೆ ಮತ್ತು ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಯಶಸ್ವಿ ಪುರುಷನ ಹಿಂದೆ ಮಹಿಳೆ ತ್ಯಾಗ ಇದ್ದೆ ಇರುತ್ತದೆ. ಸಾವಿತ್ರಿ ಬಾ ಫುಲೆಯವರು ಮೌಢ್ಯತೆಯ ಕಾಲದಲ್ಲಿ ಮಹಿಳೆಯರ ಶಿಕ್ಷಣಕ್ಕೆ ಹೋರಾಡಿದರು. ಅಂದಿನ ಅವರ ಮೊದಲ ಹೆಜ್ಜೆಗಳು ಇಂದು ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿರುವುದರ ಪ್ರೇರಣೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಾನಪದ ಕ್ಷೇತ್ರದಲ್ಲಿ
ರಾಜ್ಯೋತ್ಸವ ಪ್ರಶಸ್ತಿ ಪಡೆದ ದುರುಗಮ್ಮ ಕರಡಿಗುಡ್ಡ,
ಜಾಗೃತ ಮಹಿಳಾ ಸಂಘಟನೆ ಅಧ್ಯಕ್ಷರಾದ ಚಿನ್ನಮ್ಮ
ಮುದ್ದಂಗುಡ್ಡಿ, ಬಿ.ನಾಗರತ್ನಮ್ಮ ಸೇರಿದಂತೆ ಕರೋನಾ
ವಾರಿಯರ್ಸ್‌ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ
ವೆಂಕಟೇಶ ಗುಡ್ಯಾಳ, ಎಐಎಂಎಸ್‌ಎಸ್‌ನ ರಾಜ್ಯ ಕಾರ್ಯದರ್ಶಿಮಂಜುಳಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಾಲೂಕಾದಿಕಾರಿ ಸುಭದ್ರಾದೇವಿ, ಪುರಸಭೆ ಸದಸ್ಯೆ ಲಕ್ಷ್ಮೀ ದೇವಿನಾಯಕ, ನಾಗಲಾಂಬಿಕಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷೆ ನಾಗರತ್ನಮ್ಮ ಬೆಟ್ಟದೂರು, ಸಂಘದ ಗೌರವಾಧ್ಯಕ್ಷೆ
ಮಂಜುಳಾ ಹಿರೇಮಠ, ಕೋಶಾಧ್ಯಕ್ಷೆ ಅಶ್ವೀನಿ ಮುಧೋಳ,ಸ್ರ್ರೀರೋಗ ತಜ್ಞೆ ಡಾ.ರೋಹಿಣಿ ಮಾನ್ವೀಕರ್, ಪ್ರಾ.ಶಾ.ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಸಂಗಮೇಶ ಮುಧೋಳ,ಕಸಾಪ ಮಾಜಿ ಅಧ್ಯಕ್ಷ ಮೂಕಪ್ಪ ಕಟ್ಟಿಮನಿ ಸೇರಿದಂತೆ ಅನೇಕರಿದ್ದರು.

Comments are closed.

Don`t copy text!