ಚಿತ್ತಾಪುರ: ನನ್ನ ಕಡೆಯಿಂದ ಏನಾದರು ತಪ್ಪುಗಳಾದರೇ ಶಿಕ್ಷೆ ನನಗೆ ಕೊಡಬೇಕು. ಅದನ್ನು ಬಿಟ್ಟು ಪ್ರಿಯಾಂಕ್ ಖರ್ಗೆ ಅವರಿಗೆ ಏಕೆ ಎಂದು ಜಿಪಂ ಸದಸ್ಯ ಶಿವರುದ್ರ ಭೀಣಿ ಪ್ರಶ್ನಿಸಿದರು.
ತಾಲೂಕಿನ ಅಳ್ಳೊಳ್ಳಿ ಗ್ರಾಮದ ಗ್ರಾಪಂ ಆವರಣದಲ್ಲಿ 9 ಕೋಟಿ ರೂ. ವೆಚ್ಚದಲ್ಲಿ ಅಳ್ಳೊಳ್ಳಿಯಿಂದ ಲಾಡ್ಲಾಪುರವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ನಮ್ಮ ವೈಯಕ್ತಿಕ ವಿಷಯಗಳನ್ನು ಇಟ್ಟಿಕೊಂಡು ವಿಧಾನ ಸಭೆ ಚುನಾವಣೆಯಲ್ಲಿ ಪ್ರಿಯಾಂಕ್ ಖರ್ಗೆ ಅವರಿಗೆ ಅಳ್ಳೊಳ್ಳಿ ಗ್ರಾಮದಲ್ಲಿ ಮತಗಳನ್ನು ಕಡಿಮೆ ಹಾಕುವ ಮೂಲಕ ಅಭಿವೃದ್ಧಿ ಸರ್ದಾರನಿಗೆ ಮೋಸ ಮಾಡಲಾಗುತ್ತಿದೆ. ಹೀಗಾಗಿ ನಮ್ಮ ನಮ್ಮ ವೈಯಕ್ತಿಕ ವಿಷಯಗಳು ನಮ್ಮಲ್ಲಿಯೇ ಇಟ್ಟಿಕೊಂಡು ಪ್ರಿಯಾಂಕ್ ಖರ್ಗೆ ಅವರಿಗೆ ಮಾತ್ರ ಹೆಚ್ಚಿನ ಮತಗಳು ಹಾಕುವ ಮೂಲಕ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಿಕ್ಕೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಪ್ರಿಯಾಂಕ್ ಖರ್ಗೆ ಅವರು ಅಭಿವೃದ್ಧಿ ವಿಷಯದಲ್ಲಿ ಪಕ್ಷಪಾತ ಮಾಡಲ್ಲ. ಅವರಿಗೆ ಯಾವುದೇ ಪಕ್ಷದವರು ಹೋಗಿ ಅಭಿವೃದ್ಧಿ ಕೆಲಸಗಳು ಮಾಡಲಿಕ್ಕೆ ಹೇಳಿದರೆ ಕೂಡಲೇ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಪಡಿಸುತ್ತಾರೆ. ಅವರಿಗೆ ಆ ಗ್ರಾಮದಲ್ಲಿ ಹೆಚ್ಚು ಮತ ಬರುತ್ತೇ ಈ ಗ್ರಾಮದಲ್ಲಿ ಕಡಿಮೆ ಮತ ಬರುತ್ತೇ. ನಾನು ಅವರ ಮಾತೇ ಕೇಳಬೇಕು ಇವರ ಮಾತು ಕೇಳಬಾರದು ಎನ್ನುವ ತಾರತಮ್ಯ ಇಲ್ಲಿಯವರೆಗೆ ಮಾಡಿಲ್ಲ. ಅವರು ಮತಕ್ಕಾಗಿ ಬಳಸಿಕೊಳ್ಳುವವರಲ್ಲ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೆಳೆಸುವ ನಾಯಕರಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಳ್ಳೊಳ್ಳಿ ಗ್ರಾಮದಿಂದ ಲಾಡ್ಲಾಪುರದ ವರೆಗೆ ಮುಖ್ಯ ರಸ್ತೆ ಇದೆ. ಹೀಗಾಗಿ ಗ್ರಾಮದವರು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಯಾವುದೇ ತೊಂದರೆ ಮಾಡದೇ ಸರಿಯಾಗಿ ಕೆಲಸ ಮಾಡಲು ಅನುಕೂಲ ಮಾಡಿಕೊಡಬೇಕು. ಗುತ್ತಿಗೆದಾರರು ಸಹ ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ತಾಕೀತು ಮಾಡಿದರು.
ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ್ ಮಾತನಾಡಿ, ಸ್ವಾತಂತ್ರ್ಯ ಸಿಕ್ಕ ಮೇಲೆ ಚಿತ್ತಾಪುರ ಮತಕ್ಷೇತ್ರದಿಂದ ಅನೇಕ ಜನರು ಶಾಸಕರಾಗಿದ್ದಾರೆ. ಆದರೆ ಅವರು ಇಲ್ಲಿಯ ತನಕ ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಪ್ರಿಯಾಂಕ್ ಖರ್ಗೆ ಅವರು ಶಾಸಕರಾಗಿ ಆಯ್ಕೆಯಾದಗಿನಿಂದಲೂ ಮತಕ್ಷೇತ್ರದಲ್ಲಿ ಅಭಿವೃದ್ಧಿಯ ಹೋಳೆಯೇ ಹರಿಯುತ್ತಿದೆ ಎಂದು ಹೇಳಿದರು.
ತಾಪಂ ಸದಸ್ಯ ರವಿ ಪಡ್ಲ, ಗ್ರಾಪಂ ಉಪಾಧ್ಯಕ್ಷ ಮಂಜುನಾಥ ಪೊಲೀಸ್ ಪಾಟೀಲ್ ಮಾತನಾಡಿದರು.
ಎಇಇ ಅಣ್ಣೇಪ್ಪ ಕುದರಿ, ಗುತ್ತಿಗೆದಾರ ಎಂ.ಎಸ್ ಪಾಟೀಲ್, ಗ್ರಾಪಂ ಅಧ್ಯಕ್ಷೆ ಮರೇಮ್ಮ, ಸದಸ್ಯರಾದ ಖ್ಯಾದಿಗೇಪ್ಪ ಗುತ್ತೇದಾರ, ಯಂಕಪ್ಪ, ಮೌಲಾ, ಕಾಸಿಂ ನಾಯಿಕೋಡಿ, ದೇವಿಂದ್ರಪ್ಪ, ರವಿ, ಶರಣು, ರಾಜಶೇಖರ ಸ್ವಾಮಿ, ರಾಜಣ್ಣ, ಶ್ರೀಶೈಲ್ ಗುತ್ತೇದಾರ ಸೇರಿದಂತೆ ಗ್ರಾಮದ ಮುಖಂಡರು ಇದ್ದರು.
ವೀರಾರೆಡ್ಡಿ ಮುಸೇನಿ ಸ್ವಾಗತಿಸಿದರು. ಶಾಂತಪ್ಪ ಚಾಳಿಕಾರ ನಿರೂಪಿಸಿದರು. ದೇವಿಂದ್ರಪ್ಪ ಹಾದಿಮನಿ ವಂದಿಸಿದರು.
Prev Post
Next Post
Comments are closed.