ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ರವರ ಕರೆಗೆ ಓಗೊಟ್ಟು ಇಡೀ ದೇಶ 22-3-2020 ರಂದು ಜನತಾ ಕರ್ಪೂ ಯಶಸ್ವಿಯಾಗಿ ಕೈಗೊಂಡಿತ್ತು. ತಮ್ಮ ನಾಯಕರಿಗೆ ಗೌರವ ಕೊಟ್ಟು ಅವರ ಕರೆಯನ್ನು ಒಂದು ಆಜ್ಞೆಯಂತೆ ನಮ್ಮ ಜನಸಮುದಾಯ ಪಾಲಿಸುತ್ತದೆ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಮತ್ತೊಂದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಬಣ) ದ ಜಿಲ್ಲಾಧ್ಯಕ್ಷರಾದ ಆನಂದ ತೆಗನೂರ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಇತ್ತೀಚಿಗೆ ಮಠಾಧೀಶರ ಕರೆಗೆ ಓಗೊಟ್ಟು ಕೊರೊನಾ ಪ್ರಾಣ ಭೀತಿಯನ್ನು ಕಡೆಗಣಿಸಿ ಲಕ್ಷ ಲಕ್ಷ ಆ ಸಮುದಾಯದವರು ಪಾಲ್ಗೊಂಡು ಪ್ರತಿಭಟನೆ ನಬೂತೋ ನಭವಿಷ್ಯತಿ ಎನ್ನುವಂತೆ ಯಶ್ವಸಿ ಮಾಡೊದರು. ಆದರೆ ರಾಜಕೀಯ ನಾಯಕರ ಕರೆಗಂತೂ ಅಭೂತಪೂರ್ವ ಪ್ರತಿಕ್ರಿಯೆ ಸಿಗುತ್ತದೆ. ರೈತ ಮುಖಂಡರ ಮಾತು ಎಂದರೆ ನಮ್ಮ ರೈತರು ಪ್ರಾಣ ಕೊಡಲು ಸಿದ್ದರಿದ್ದಾರೆ ಎಂದು ಹೇಳಿದರು.
ದೆಹಲಿ ಹೆದ್ದಾರಿಯಲ್ಲಿ ನೂರು ದಿನ ಪೂರೈಸಿ ಇನ್ನೂರನೆ ದಿನದತ್ತ ಸಾಗಿರುವ ಹೆದ್ದಾರಿ ತಡೆ ಪ್ರತಿಭಟನೆಯೇ ಸಾಕ್ಷಿ. ಈಗ ಕೊರೊನಾ ಎರಡನೇ ಅಲೆ ಸುನಾಮಿಯಂತೆ ಅಪ್ಪಳಿಸುತ್ತಿದೆ. ಇದನ್ನು ಗಂಭೀರವಾಗಿ ತೆಗೆದುಕೊಂಡು ನಮ್ಮ ವಿವಿಧ ಸಮುದಾಯದ ನಾಯಕರು ತಮ್ಮ ಜಾತಿ ವರ್ಗ ಪಕ್ಷದವರಿಗೆ ಈ ಕೊರೊನಾ ರುದ್ರ ರೂಪದಿಂದ ಒದಗಲಿರುವ ಸಂಕಷ್ಟಗಳನ್ನು ಮನದಟ್ಟು ಮಾಡಿ ಅತ್ಯಂತ ಸುಲಭವೂ ಅನುಷ್ಠಾನವನ್ನು ಮಾಡಲು ಸಾಧ್ಯವಾಗಿರುವ ಮಾಸ್ಕ್ ಧಾರಣ ಮತ್ತು ಅಂತರ ಕಾಯ್ದುಕೊಳ್ಳುವಂತೆ ಕರೆ ಕೊಟ್ಟರೆ ಈ ಕೊರೊನಾವನ್ನು ಸುಲಭವಾಗಿ ದೂರ ಇಡಬಹುದು. ಇದು ಸರಕಾರಕ್ಕೆ ಖಂಡಿತ ಸುಲಭವಲ್ಲ ಈ ಸ್ವ ಹೇರಿಕೆಯ ಜನತಾ ಲಾಕ್ ಡೌನ್ ನಮ್ಮ ಸಮೂಹ ನಾಯಕರ ಜನರ ಕಾಳಜಿಯನ್ನು ಅವಲಂಬಿಸಿದೆ ಕೂಡಲೇ ಕೇಂದ್ರ ಸರಕಾರವು ಡೇಂಜರ್ ಝೂನ್ ಇರುವ ಜಿಲ್ಲೆಗಳನ್ನು ಲಾಕ್ ಡೌನ್ ಮಾಡುವ ಅನಿವಾರ್ಯವಿದೆ ಎಂದು ಅವರು ಕೇಂದ್ರ ಸರಕಾರಕ್ಕೆ ಮನವಿ ಮಾಡಿದರು.
Prev Post
Next Post
Comments are closed.