Shubhashaya News

ಕೋವಿಡ್ ಲಸಿಕೆ ಜಾಗೃತಿ ಮೂಡಿಸಲು ಮನವಿ

ಕಲಬುರಗಿ: ದೇಶದ ಕೆಲವು ರಾಜ್ಯದಲ್ಲಿ ಕೊರೊನಾ ಸೊಂಕು ಹರಡುವಿಕೆಯು ಇನ್ನಷ್ಟು ಹೆಚ್ಚುವುದನ್ನು ತಡೆಯುವುದಕ್ಕಾಗಿ ದೇಶದ ಕೆಲವು ರಾಜ್ಯದ ಸ್ಥಳಗಳಲ್ಲಿ ಲಾಕ್ ಡೌನ್ ಮತ್ತು ಕಪ್ಯೂ೯ ವಿಧಿಸಲಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಸದ್ಯಕ್ಕೆ ಲಾಕ್ ಡೌನ್ ಮತ್ತು ಕಪ್ಯೂ೯ ವಿಧಿಸದಿರುವುದು ಉತ್ತಮ ನಿರ್ಧಾರ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಬಣ) ದ ಕಲ್ಯಾಣ ಕರ್ನಾಟಕ ಅಧ್ಯಕ್ಷರಾದ ಶರಣು ಹೊಸಮನಿ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಲಸಿಕೆ ಬಂದ ಮೇಲೂ ಲಾಕ್ ಡೌನ್ ಯಾಕೆ ಬೇಕು ಎಂಬ ಜನರಲ್ಲಿ ಪ್ರಶ್ನೆ ಹುಟ್ಟಿಕೊಂಡಿದೆ. ಆದರೆ ಜನರಿಗೆ ಲಸಿಕೆಯ ಬಗ್ಗೆ ಭಯ ಮತ್ತು ಅನುಮಾನ ಕಾಡುತ್ತಿದೆ. ಕೆಲಸ ಮಾಡದ ಲಸಿಕೆ ಹಾಕುವುದರಿಂದ ಪ್ರಯೋಜನವೇನು ಎಂಬ ದೂರುಗಳು ಜನರಿಂದ ಕೇಳಿಬರುತ್ತಿದೆ. ಲಸಿಕೆ ಸರಿ ಇದ್ದರೂ ಲಸಿಕೆ ವಿತರಿಸಿ ಮತ್ತೆ ಕೊರೊನಾ ಭಯ ಸೃಷ್ಟಿಸುವುದು ಲಾಕ್ ಡೌನ್ ಮಾಡುವುದು ಏಕೆ ಎಂದು ಜನರಿಗೆ ಸ್ಪಷ್ಟವಾದ ಉತ್ತರವನ್ನು ಸರಕಾರ ನೀಡಬೇಕು. ಈ ಹಿಂದೆ ಸರಕಾರವೇ ಹೇಳಿದ ಲಸಿಕೆ ಬಂದ ಮೇಲೆ ಕೊರೊನಾದ ಭಯಪಡಬೇಡಿ. ಲಸಿಕೆ ಹಾಕಿಸಿಕೊಂಡರೆ ಕೊರೊನಾ ಸಂಪೂರ್ಣವಾಗಿ ನಾಶವಾಗುತ್ತದೆ ಎಂದು ಲಸಿಕೆ ಬಂದು ತಿಂಗಳೂಗಳೇ ಕಳೆಯಿತು. ಮತ್ತೆ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಾ ಇರುವುದು ವಿಷಾದನೀಯ ಎಂದರು. ಸರಕಾರ ಕೂಡಲೇ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದರ ಬಗ್ಗೆ ನಗರ-ಗ್ರಾಮೀಣ ಎನ್ನದೇ ಜನರಲ್ಲಿ ಜಾಗೃತಿ ಮೂಡಿಸಬೇಕಾದ ತುರ್ತು ಅಗತ್ಯವು ಇದೆ. ಕೋವಿಡ್ ತಡೆಯ ನಿಯಮ ಪಾಲನೆಗಳಲ್ಲಿ ಅಧಿಕಾರಸ್ಥರಿಗೆ ವಿನಾಯಿತಿ ನೀಡುವ ಜೊತೆಗೆ ಸರಕಾರವೇ ಗಂಭೀರವಾಗಿ ಜವಬ್ದಾರಿವಹಿಸಿ ಕೊರೊನಾ ನಿಯಂತ್ರಿಸಲು ಪಣತೊಡಬೇಕು ಎಂದು ಅವರು ಸರಕಾರಕ್ಕೆ ಮನವಿ ಮಾಡಿದರು.

Comments are closed.

Don`t copy text!