Shubhashaya News

ಮುಖ್ಯಮಂತ್ರಿ ರೈತ ಸಮುದಾಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ: ಸಿದ್ದುಗೌಡ

ಚಿತ್ತಾಪುರ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ರೈತ ಸಮುದಾಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಎಪಿಎಂಸಿ ಅಧ್ಯಕ್ಷ ಸಿದ್ದುಗೌಡ ಅಫಜಲ್‍ಪುರಕರ್ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದ ಮಠ ಮಂದಿರಗಳಿಗೆ ಬಜೆಟ್ ಮಂಡನೆ ಬಳಿಕವೂ ಅನುದಾನ ನೀಡಿದ್ದಾರೆ. ಜಿರ್ಣೋದ್ಧಾರ ಮತ್ತು ಮೂಲ ಸವಲತ್ತುಗಳನ್ನು ಕಲ್ಪಿಸುವ ಹೆಸರಿನಲ್ಲಿ ಜಾತಿವಾರು ಮತ ಸೆಳೆಯಲು ಧಾರ್ಮಿಕ ಸಂಸ್ಥೆಗಳಿಗೆ ಕೋಟಿಗಟ್ಟಲೇ ಅನುದಾನ ನೀಡಿದ್ದಾರೆ. ಆದರೆ ಎಲ್ಲ ಜಾತಿಯ ಸಮುದಾಯವಿರುವ ರೈತ ಸಮುದಾಯದಲ್ಲಿ ರೈತರನ್ನು ಮರೆತು ರೈತರ ಬಾಳಿನೊಂದಿಗೆ ಚೆಲ್ಲಾಟವಾಡುತ್ತಿರುವುದು ಎಷ್ಟರ ಮಟ್ಟಿಗೆ ಸರೀ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಅತಿವೃಷ್ಠಿಯಿಂದ ರೈತರು ಕಷ್ಟಪಟ್ಟು ಬೆಳೆದ ಬೆಳೆ ಹಾಳಾಗಿ ಹೋಗಿದೆ. ಹಾಳಾದ ಬೆಳೆಗೆ ಕನಿಷ್ಠ ಎಕರೆಗೆ 25000 ರೂ. ಪರಿಹಾರ ಕೊಡಬೇಕು ಎಂದು ಆಗ್ರಹಿಸಿದ ರೈತರಿಗೆ ಕೇವಲ ಎಕರೆಗೆ 2500 ರೂ. ಮಾತ್ರ ಘೋಷಣೆ ಮಾಡಿದ್ದರು. ಆದರೆ ಕೊರೊನಾ ಹಾವಳಿಯಿಂದ ಸರ್ಕಾರದಲ್ಲಿ ಹಣ ಇಲ್ಲ. ಹಂತ ಹಂತವಾಗಿ ರೈತರ ಖಾತೆಗೆ ಜಮಾ ಮಾಡುವುದಾಗಿ ಹೇಳಿದ್ದರು. ಆದರೆ ಇಲ್ಲಿಯವರೆಗೆ ರೈತರ ಖಾತೆಗೆ ಹಣ ಜಮಾವಾಗಿಲ್ಲ. ಆದ್ದರಿಂದ ಕೂಡಲೇ ಮುಖ್ಯಮಂತ್ರಿ ಅವರು ಮಾರ್ಚ್ ಮುಗಿಯುವುದರೊಳಗೆ ರೈತರ ಖಾತೆಗೆ ಹಣ ಜಮಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Comments are closed.

Don`t copy text!