ರವಿವಾರ ಸಂಜೆ ಡ್ರಾ ಆಗಬೇಕಾಗಿದ್ದ ಆರು ಕೋಟಿಯ 12 ಲಾಟರಿಗಳು ರವಿವಾರ ಮಧ್ಯಾಹ್ನನದವರೆಗೂ ಮಾರಾಟವಾಗದೆ ಸ್ಮೀಜಾ ಅವರ ಬಳಿ ಉಳಿದಿತ್ತು.. ಆಗ ಹಲವರಿಗೆ ಕರೆ ಮಾಡಿ ಲಾಟರಿ ಖರೀದಿಸುವಂತೆ ಆಕೆ ಒತ್ತಾಯಿಸಿದಳು.. ಪಿ ಕೆ ಚಂದ್ರನ್ ಎಂಬ ವ್ಯಕ್ತಿ ಕೊನೆಯ ನಂಬರ್ 6142 ಇರುವ ಲಾಟರಿ ಟಿಕೆಟನ್ನು ತನಗಾಗಿ ಕಾಯ್ದಿರಿಸಬೇಕೆಂದು ಟಿಕೆಟ್ ಹಣವಾದ 200 ರುಪಾಯಿಯನ್ನು ನಾಳೆ ಕೊಡುವುದಾಗಿ ಹೇಳಿದ್ದರು.. ಸಂಜೆ ಲಾಟರಿ ಡ್ರಾ ಆದಾಗ SD 316142 ಎಂಬ ಅದೇ ನಂಬರಿಗೆ 6 ಕೋಟಿ ಹೊಡೆದಿತ್ತು..
ಅಂದು ರಾತ್ರಿಯೇ ಸ್ಮೀಜಾ ಪಿಕೆ ಚಂದ್ರನ್ ಅವರ ಮನೆಗೆ ತೆರಳಿ ಆ ಲಾಟರಿ ಟಿಕೇಟನ್ನು ಅವರಿಗೆ ನೀಡಿ 200 ರುಪಾಯಿ ಪಡೆದು ಎಂದಿನಂತೆ ತಮ್ಮ ಲಾಟರಿ ಮಾರಾಟ ಮುಂದುವರಿಸಿದರು..
ಕೊಟ್ಟ ಮಾತು ತಪ್ಪಬಾರದು ಎಂದು ಹೇಳುವ ಈ ಜಗತ್ತಿನಲ್ಲಿ ಕೊಟ್ಟ ಮಾತು ದೊಡ್ಡ ಸತ್ಯ ಎಂದು ತನ್ನ ನಡವಳಿಕೆಯಿಂದ ಜಗತ್ತಿಗೆ ತೋರಿಸಿದ ಸ್ಮೀಜಾ ಅವರಿಗೊಂದು ಬಿಗ್ ಸಲ್ಯೂಟ್
Comments are closed.