ಲಿಂಗಸುಗೂರು : ನಾಗರಿಕ ತರಭೇತಿ ಶಿಬಿರದಲ್ಲಿ ಪ್ರ.ಶಿಕ್ಷಣಾರ್ಥಿಗಳು ಪಾಲ್ಗೊಂಡು ಶಿಬಿರದ ಸದುಪಯೋಗ ಪಡಿಸಿಕೊಳ್ಳಿ ಎಂದು ಶ್ರೀಸಂಜೀವ ಕಾಲೇಜಿನ ಪ್ರಾಚಾರ್ಯರು ವೆಂಕಟೇಶ ಕವಿತಾಳ ಸಲಹೆ ನೀಡಿದರು.
ಪಟ್ಟಣದ ಶ್ರೀಸಂಜೀವ ಶಿಕ್ಷಣ ಮಾಹಾವಿದ್ಯಾಲಯ(ಬಿ.ಎಡ್)ದಲ್ಲಿ ಬುಧವಾರ ಜರುಗಿದ ಪೌರತ್ವ ಶಿಬಿರ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೌರತ್ವ ಹೇಗೆ ಪಡೆಯಬೇಕು, ಅದರ ಲಕ್ಷಣಗಳು ಹೇಗಿವೆ, ಕಾನೂನುಗಳು, ಲಕ್ಷಣಗಳು, ಯಾವ ಕಾಯ್ದೆಗಳ ಮೂಲಕ ಪೌರತ್ವ ಪಡೆದುಕೊಳ್ಳಬಹುದು ಎಂಬುವುದನ್ನು ತರಭೇತಿ ಶಿಬಿರದಲ್ಲಿ ಪ್ರ.ಶಿಕ್ಷಣಾರ್ಥಿಗಳಿಗೆ ಎರಡು ದಿನಗಳ ಕಾಲ ತರಭೇತಿ ನೀಡಲಾಗುವುದು ತರಭೇತಿಯಲ್ಲಿ ಪ್ರತಿಯೊಬ್ಬರು ಸಹ ಪಾಲ್ಗೊಂಡು ಯಶ್ವಸಿಗೊಳಿಸುವ ಮೂಲಕ ಸದುಪಯೋಗ ಪಡಿಸಿಕೊಳುವಂತೆ ತಿಳಿಸಿದರು.
ನಂತರ ಸಂಜೀವ ಪಬ್ಲಿಕ್ ಸ್ಕೂಲ್ ಆಡಳಿತಾಧಿಕಾರಿ ರವಿಚಂದ್ರನ್ ಎನ್ ಮಾತನಾಡಿ, ನಾಗರೀಕ ಹಕ್ಕುಗಳು 6-14 ವರ್ಷದ ಒಳಗಿನವರು ಪಡೆಯಲು ಕುರಿತು ಮಾತನಾಡಿದರು,
ಅಮರೇಶ ನಿರುಪಿಸಿದರು, ಪೂಜಾ.ಕೆ ಪ್ರಾರ್ಥಿನಿಸಿದರು,
ಈ ವೇಳೆಯಲ್ಲಿ ಅಮರೇಶ ಪ್ರಬಾರಿ ಪ್ರಾಚಾರ್ಯರು ಕಾನೂನು ಕಾಲೇಜು, ಉಪನ್ಯಾಸಕರಾದ ಯಲ್ಲಪ್ಪ ಬೊಮ್ಮಣಿಗಿ, ಚನ್ನಬಸವ ಕೋಠೆ, ಚಂದ್ರಶೇಖರ, ವಿರೇಶ ಎಮ್‍ಎಸ್‍ಡ್ಲೂ ಸೇರಿದಂತೆ ಇದ್ದರು.
Comments are closed.