ಲಿಂಗಸುಗೂರು : ಕನ್ನಡ ಸಾರಸ್ವತ ಲೋಕದ ಪ್ರಾಧಿನಿಕ ಸಂಸ್ಥೆಯಾಗಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಒಂದು ಗುಂಪು, ಕೋಮಿಗೆ ಸಿಮೀತವಾಗದೆ ಅಧಿಕಾರ ವಿಕೇಂದ್ರಿಕರಣವಾಗಲಿ ಎಂದು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಕವಿ ಲಕ್ಷಣ ಬಾರಿಕೇರ ಹಾಗೂ ಸಿರಿಗನ್ನಡ ಸಾಹಿತ್ಯ ವೇದಿಕೆ ಅಧ್ಯಕ್ಷ, ಯುವ ಕಥೆಗಾರ ಶರಣಬಸವ ಕೆ.ಗುಡದಿನ್ನಿ(ಮ್ಯಾಡಿ) ಆಗ್ರಹಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಸಕ್ರಿಯವಾಗಿ ಕೆಲಸ ಮಾಡಲು ಮಾನಸಿಕ, ದೈಹಿಕ ಸಾಮಥ್ರ್ಯವು ಅಗತ್ಯವಾಗಿದೆ. ಜಿಲ್ಲಾಧ್ಯಕ್ಷ ಸ್ಥಾನವು ಒಂದು, ಗುಂಪು ಕೋಮಿಗೆ ಸಿಮೀತವಾಗಿದೆ ಪರಿಣಾಮ ಸಾಹಿತ್ತಿಕ ಚಟುವಟಿಕೆಗಳು ಒಂದು ಗುಂಪಿಗೆ ಸಿಮೀತವಾಗಿ ನಡೆಯುತ್ತಿವೆ ಪರಿಣಾಮ ಅನೇಕ ಯುವ ಪ್ರತಿಭೆಗಳಿಗೆ ಅನ್ಯಾಯವಾಗುತ್ತಿದೆ. ಇನ್ನೂ ಲಿಂಗಸುಗೂರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಂಪೂರ್ಣ ಗುಂಪಿನ ಹಿಡಿತದಲ್ಲಿದೆ, ಬರಹಗಾರರು, ಸಾಹಿತಿಗಳಿಗೆ ಪ್ರೋತ್ಸವಿಲ್ಲದಂತಾಗಿದೆ ಪರಿಣಾಮ ಕಸಾಪಗೆ ರಾಜೀನಾಮೆ ಕೊಟ್ಟು ನಮ್ಮದೇ ಪ್ರತ್ಯೇಕ ಸಂಘ ರಚನೆ ಮಾಡಿಕೊಂಡು ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ, ಯುವ ಬರಹಗಾರರಿಗೆ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಕಥೆಗಾರ ಶರಣಬಸವ ಕೆ.ಗುಡದಿನ್ನಿ(ಮ್ಯಾಡಿ), ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಮುಂದಿನ ದಿನಗಳಲ್ಲಿ ಚುನಾವಣೆ ನಡೆಯಲಿದ್ದು ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಸ್ವಾಮಿ ಶಿಖರಮಠರನ್ನು ಸಮಾನ ಮನಸ್ಕರು ಚರ್ಚಿಸಿ ಅಭ್ಯರ್ಥಿಯಾಗಿ ನಿರ್ಣಯಿಸಲಾಗಿದೆ, ಶಿಖರಮಠರು ಅಗಾದ ಸಾಹಿತ್ಯದ ಕೃಷಿ ಮಾಡಿದ್ದಾರೆ. ಇವರ ಕುಟುಂಬವು ಸಾಹಿತ್ಯ ವಲಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಇವರ ತಂದೆಯೂ ಕೂಡಾ ಉತ್ತಮ ಸಾಹಿತ್ಯದ ಸಂಘಟಕರೂ ಆಗಿದ್ದರು ಅಲ್ಲದೇ ರಾಯಚೂರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ 2 ಅವಧಿಗಳಲ್ಲಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಪ್ರತಿಭಾವಂತ ಯುವ ಸಾಹಿತಿಗಳು ಆದ ಶಿಖರಮಠರನ್ನು ಬೆಂಬಲಿಸಿ ಗೆಲ್ಲಿಸಬೇಕೆಂದು ಹೇಳಿದರು.
ದಲಿತ ಸಾಹಿತ್ಯ ಪರಿತ್ತಿನ ಅಧ್ಯಕ್ಷ ಅಮರೇಶ ವೆಂಕಟಾಪುರ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಒಂದು ಪಟಾಲಂ ತಳವೂರಿ ಕುಳಿತಿದೆ. ಇದರಿಂದ ಪ್ರತಿಭಾವಂತ ಸಾಹಿತಿಗಳಿಗೆ ಪ್ರೋತ್ಸಾಹ ಇಲ್ಲದಂತಾಗಿದೆ. ಸಾಹಿತ್ಯ ಪರಷತ್ತು ಪ್ರತಿಭಾವಂತರ ಪ್ರೋತ್ಸಾಹಿಸುವ ವೇದಿಕೆ ಆಗಬೇಕು ಬದಲಾಗಿ ಯಾರದೋ ಕಪಿಮುಷ್ಠಿಯಲ್ಲಿ ಸಿಲುಕಿ ನರಳುತ್ತಿದ್ದೆ. ಮುಂದಿನ ಚುನಾವಣೆಯಲ್ಲಿ ಮಲ್ಲಿಕಾರ್ಜು ಸ್ವಾಮಿ ಶಿಖರಮಠರನ್ನು ಸಾಹಿತ್ಯಾಸಕ್ತರು ಬೆಂಬಲಿಸುವ ಮುಖೇನ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಈ ವೇಳೆ ಪ್ರಾಚಾರ್ಯ ಮಹಾಂತಗೌಡ ಪಾಟೀಲ್, ಸಾಹಿತಿ ಡಾ.ಶರಣಪ್ಪ ಆನಾಹೊಸೂರು, ಪರಮಾನಂದ ಸೇರಿದಂತೆ ಇದ್ದರು.
Comments are closed.