Shubhashaya News

ಪದವಿ ವಿದ್ಯಾರ್ಥಿಗಳಿಗೆ ಹೆಚ್ಚಿದ ಪರೀಕ್ಷಾ ಶುಲ್ಕ ಕಡಿವಾಣಕ್ಕೆ ಒತ್ತಾಯ

ಲಿಂಗಸುಗೂರು : ಪದವಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕದ ಹೆಸರಿನಲ್ಲಿ ಹೆಚ್ಚುವರಿ ಹಣ ಲೂಟಿ ಮಾಡಲಾಗುತ್ತಿದೆಇದಕ್ಕೆಕಡಿವಾಣ ಹಾಕುವಂತೆ ಭಾರತ ವಿದ್ಯಾರ್ಥಿ ಫೇಡರೇಷನ್‍ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಸಹಾಯಕಆಯುಕ್ತರ ಮೂಲಕ ಕುಲಸಚಿವರು(ಮೌಲ್ಯಮಾಪನ)ಗುಲಬುರ್ಗಾಇವರಿಗೆಮನವಿ ನೀಡಿ ಒತ್ತಾಯಿಸಿದರು.

ಗುಲಬುರ್ಗಾ ವಿಶ್ವವಿದ್ಯಾಲಯಆದೇಶದಂತೆ ವಿದ್ಯಾರ್ಥಿಗಳು ಅಂಕಪಟ್ಟಿ ಶುಲ್ಕ 150, ಅರ್ಜಿತಪಾಸಣೆ ಶುಲ್ಕ 18, ಅರ್ಜಿ ಸಂಸ್ಕರಣಾ ಶುಲ್ಕ ಸೇರಿಒಟ್ಟು 259 ರೂಪಾಯಿ ಕಟ್ಟಿಸಿಕೊಳ್ಳಬೇಕು ಆದರೆ ನಿಯಮವನ್ನು ಉಲ್ಲಂಘಿಸಿ ವಿದ್ಯಾರ್ಥಿ ವೇತನಕ್ಕೆಅರ್ಜಿ ಸಲ್ಲಿಸಿದ ಹಾಗೂ ಸಲ್ಲಿಸದ ವಿದ್ಯಾರ್ಥಿಗಳಿಗೂ ಒಂದೇರೀತಿಯಾಗಿ 133-1540ರವರೆಗೆ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ, ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಪರಿಸ್ಕರಣ ಶುಲ್ಕವೂ ವಿದ್ಯಾರ್ಥಿ ವಿರೋಧಿ ಶುಲ್ಕವಾಗಿದೆಎಂದು ಆರೋಪಿಸಿದರು.
ಪದವಿ ವಿದ್ಯಾರ್ಥಿಗಳಿಗೆ 1000-2000 ರೂಪಾಯಿವರೆಗೆ ವಸೂಲಿ ಮಾಡಲಾಗುತ್ತಿದೆಪರೀಕ್ಷಾ ಶುಲ್ಕವನ್ನುಕಟ್ಟುವಕೊನೆಯ ದಿನಾಂಕ 28 ಆಗಿದ್ದುಕೂಡಲೇ ಶುಲ್ಕವನ್ನುಕಡಿಮೆ ಮಾಡಬೇಕುಎಂದು ಆಗ್ರಹಿಸಿದರು.
ಸಹಾಯಕ ಆಯುಕ್ತರ ಕಛೇರಿಯ ಮಹಿಳಾ ಸಿಬ್ಬಂದಿ ಮನವಿ ಪತ್ರ ತೆಗೆದುಕೊಂಡರು ಆದರೆ ಕೋವಿಡ್ ನಿಯಮದಂತೆ ಮಾಸ್ಕ ಧರಿಸದೇ ನಿಯಮಗಳನ್ನು ಗಾಳಿಗೆ ತೋರಿದ್ದು, ಮನವಿ ನೀಡಿದರು ಸಹ ಮಾಸ್ಕ ಧರಿಸಲಿಲ್ಲ ಇದರಿಂದ ಸರ್ಕಾರದ ಅಧಿಕಾರಿಗಳಿಗೆ ನಿಯಮ ಪಾಲನೆ ಮಾಡುತ್ತಿಲ್ಲ ಎಂಬುವುದು ಗೊತ್ತಾಗುತ್ತಿಲ್ಲ.
ಈ ವೇಳೆಯಲ್ಲಿ ಎಸ್‍ಎಪ್‍ಐಜಿಲ್ಲಾಧ್ಯಕ್ಷ, ಗ್ರಾ.ಪಂ ಸದಸ್ಯರಮೇಶ ವೀರಾಪೂರ, ಅಮರೇಗೌಡ, ಶಿವಕುಮಾರ ರಾಠೋಡ, ಸಂತೋಪ, ಮಂಜುಳಾ, ಲಕ್ಷ್ಮೀಬಾಯಿ, ಸುದಾಬಾಯಿ ಸೇರಿದಂತೆಇದ್ದರು.

 

Comments are closed.

Don`t copy text!