Shubhashaya News

ಮಾಸ್ಕ ಧರಿಸಿ ಇಲ್ಲ ದಂಡ ಕಟ್ಟಿ :ಪುರಸಭೆ ಅಧಿಕಾರಿಗಳ ಎಚ್ಚರಿಕೆ

ಲಿಂಗಸುಗೂರು : ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪುರಸಭೆ ಅಧಿಕಾರಿಗಳು ಮಾಸ್ಕ ಧರಸಿ ಇಲ್ಲವಾದಲಿ ದಂಡ ಕಟ್ಟುವಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದರು.
ಕೊವಿಡ-19 ನಿಯಮಗಳು ಕಡ್ಡಾಯವಾಗಿ ಪಾಲಿಸಬೇಕು ಬೈಕ ಸವಾರರು, ಗುಂಪು ಗುಂಪಾಗಿ ಸೇರುವುದು ಅಪರಾದ ಬೈಕನಲ್ಲಿ ಹೋಗುವವರು ಮಾಸ್ಕ ಕಡ್ಡಾಯವಾಗಿ ಧರಿಸಲು ಸೂಚಿಸಿದರು, ಪಟ್ಟಣದ ಬಸ್‍ನಿಲ್ದಾಣದ ಬಳಿ ಪುರಸಭೆಯ ಅಧಿಕಾರಿಗಳು ಸವಾರರಿಗೆ ಅಡ್ಡಗಟ್ಟಿ ದಂಡ ಹಾಕಿಸಿದರು.
ಬಸ್‍ನಿಲ್ದಾಣಕ್ಕೆ ಬರುವ ಬಸ್‍ಗಳನ್ನು ಚೆಕ್ ಮಾಡುವ ಮೂಲಕ ಎಚ್ಚರಿಸಿದರು. ಪ್ರತಿವೊಬ್ಬರು ಮಾಸ್ಕ ಕಡ್ಡಾಯ ಹಾಕಬೇಕು, ಕಾರು, ಬಸ್, ಲಾರಿ, ಬೈಕ, ಸೇರಿದಂತೆ ಪ್ರತಿವೊಂದು ವಾಹನಗಳು ಚೆಕ್ ಮಾಡಿ 100 ದಂಡ ವಿಧಿಸಿದರು.
ಪಾಸ್ಟೀಕ್ ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ ದಾಳಿ ಮಾಡಿ ಪಾಸ್ಟೀಕ್ ಸಾಮಾನುಗಳನ್ನು ವಶಪಡಿಸಿಕೊಂಡರು ಇದರಿಂದ ಪಾಸ್ಟಿಕ್ ನಿಷೇಧ ಕಾನೂನು ಪಾಲನೆ ಮಾಡಬೇಕೆಂದು ತಿಳಿಸಿದರು.
ಈ ವೇಳೆಯಲ್ಲಿ ಪುರಸಭೆಯ ಮುಖ್ಯಾಧಿಕಾರಿ ವಿಜಯಲಕ್ಷ್ಮೀ, ಅದ್ಯಕ್ಷೆ ಗದ್ದೇಮ್ಮ, ಶಿವಲಿಂಗ ಮೇಗಳಮನಿ, ಶಾನವಾಜ್ ಸೇರಿದಂತೆ ಇದ್ದರು.

Comments are closed.

Don`t copy text!