Shubhashaya News

ನಾಲೆಗೆ ನೀರು ಹರಿಸಲು ಆಗ್ರಹಿಸಿ ರೈತರಿಂದ ಹಗಲು ಧರಣಿ, ರಾತ್ರಿ ಭಜನೆ

ಲಿಂಗಸುಗೂರುತಾಲೂಕಿನಗುರುಗುಂಟಾದಲ್ಲಿ ಬಲದಂಡೆ ನಾಲೆಗೆ ನೀರುಹರಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಧರಣಿ ನಡೆಸುತ್ತಿರುವರೈತರು.

ಲಿಂಗಸುಗೂರುತಾಲೂಕಿನಗುರುಗುಂಟಾದಲ್ಲಿರಾತ್ರಿ ಭಜನೆ ಮಾಡುವ ಮೂಲಕ ರೈತರುಆಹೋರಾತ್ರಿಧರಣಿ ನಡೆಸುತ್ತಿದ್ದಾರೆ.

ನಾರಾಯಣಪುರ ಬಲದಂಡೆ ನಾಲೆ ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ಏಪ್ರಿಲ್ ತಿಂಗಳ ವರೆಗೆ ನೀರು ಹರಿಸಬೇಕೆಂದು ಆಗ್ರಹಿಸಿ ತಾಲೂಕಿನಗುರುಗುಂಟಾ ಹೋಬಳಿ ರೈತರುಗುರುಗುಂಟಾದರಾಷ್ಟ್ರೀಯ ಹೆದ್ದಾರಿ 150(ಎ)ಯಲ್ಲಿರೈತರು ಹಗಲು ಧರಣಿ ನಡೆಸಿದರೆ ರಾತ್ರಿ ಭಜನೆ ಮಾಡುವ ಮೂಲಕ ನೀರು ಹರಿಸಲು ಆಗ್ರಹಿಸಿದರು.
ಪ್ರಸಕ್ತ ಭಾರಿ ಮಳೆಯ ಕಾರಣ ಬಸವಸಾಗರಜಲಾಶಯ ಪೂರ್ಣ ಭರ್ತಿಯಾಗಿದೆ. ಇದರಿಂದಅಚ್ಚುಕಟ್ಟು ಪ್ರದೇಶದರೈತರು ಬೇಸಿಗೆ ಹಂಗಾಮಿನಲ್ಲಿ ಬತ್ತ ಸೇರಿದಂತೆ ಬೆಳೆಗಳ ಬಿತ್ತನೆ ಮಾಡಿದ್ದಾರೆ. ಈ ಮದ್ಯೆ ನಾಲೆಯಆಧುನೀಕರಣಕಾಮಗಾರಿ ನೆಪದಲ್ಲಿಅಚ್ಚುಕಟ್ಟು ಪ್ರದೇಶಕ್ಕೆ ಸಮರ್ಪಕ ನೀರು ಹರಿಸಿಲ್ಲ. ಇದರಿಂದ ಬೇಸಿಗೆ ಬೆಳೆ ಬಿತ್ತನೆಗೆ ಹಿನ್ನೆಡೆಯಾಗಿರೈತರು ಬತ್ತ ಸೇರಿ ಬೆಳೆಗಳ ತಡವಾಗಿ ನಾಟಿ ಮಾಡಿದ್ದಾರೆ. ಇದರಿಂದ ಮಾರ್ಚ ತಿಂಗಳಲ್ಲಿ ಬೆಳೆ ಕೈಗೆ ಬರುವುದಿಲ್ಲ. ಅಲ್ಲದೇ ಬತ್ತವು ಈಗಾಗಲೆ ತೆನೆ ಬಿಡುವ ಹಂತದಲ್ಲಿ ನೀರು ಹರಿಸುವುದು ನಿಲ್ಲಿಸಿದರೇ ಬತ್ತ ಕಾಳು ಕಟ್ಟದೆರೈತರಿಗೆ ಬೆಳೆ ದಕ್ಕುವುದಿಲ್ಲ ಅಲ್ಲದೇ ಮಾರ್ಚ ತಿಂಗಳಲ್ಲಿ ನೀರು ಬಂದ್ ಮಾಡುವುದರಿಂದ ಸಾವಿರಾರುಎಕರೆ ಪ್ರದೇಶದಜಮೀನಲ್ಲಿನ ಬತ್ತ ಸಂಪೂರ್ಣ ಹಾಳಾಗಲಿದೆ ಎಂದುಧರಣಿ ನಿರತರು ಹೇಳಿದರು.
ಕೂಡಲೇಏಪ್ರಿಲ್ 20ರ ವರಗೆ ನಾರಾಯಣಪುರ ಬಲದಂಡೆ ನಾಲೆ ವ್ಯಾಪ್ತಿಯಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಬೇಕುಇಲ್ಲದಿದ್ದರೆರಾಷ್ಟ್ರೀಯ ಹೆದ್ದಾರಿ ಹೋರಾಟ ತೀವ್ರಗೊಳಿಸಲಾಗುವುದೆಂದು ರೈತರು ಕಳೆದ ನಾಲ್ಕು ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಧರಣಿ ಸ್ಥಳಕ್ಕೆ ತಹಸೀಲ್ದಾರ ಚಾಮರಾಜ್ ಪಾಟೀಲ್ ಬೇಟಿಇದೇ 28ರಂದು ಸಭೆಇದ್ದು ಸಭೆಯ ಗಮನಕ್ಕೆ ತಂದು ನೀರು ಹರಿಸುವ ಬಗ್ಗೆ ತೀರ್ಮಾನಿಸಲಾಗುವುದೆಂದು ಹೇಳಿದರು. ರೈತರು 28ರ ವರೆಗೂಅಹೋರಾತ್ರಿಧರಣಿ ನಡೆಸುವುದಾಗಿ ಪಟ್ಟು ಬಿಡದೇ ಹಗಲು ಧರಣಿ, ರಾತ್ರಿ ಭಜನೆ ಮಾಡುವ ಮೂಲಕ ಹೋರಾಟ ತೀವ್ರಗೊಳಿಸಿದ್ದಾರೆ.

Comments are closed.

Don`t copy text!