Shubhashaya News

ಕರುನಾಡ ವಿಜಯಸೇನೆಗೆ ಪದಾಧಿಕಾರಿಗಳ ನೇಮಕ

ಲಿಂಗಸುಗೂರು :ಕರುನಾಡ ವಿಜಯಸೇನೆ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು.
ಸೇನೆಯ ಜಿಲ್ಲಾಧ್ಯಕ್ಷ ಎಂ.ಸಿ.ಚಂದ್ರಶೇಖರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ತಾಲೂಕು ಅಧ್ಯಕ್ಷ ರಮೇಶ ಸುಂಕದ ಕರಡಕಲ್, ಜಿಲ್ಲಾ ಸಂಘಟನೆ ಕಾರ್ಯದರ್ಶಿ ಮುತ್ತಣ್ಣ ಗುಡಿಹಾಳ, ತಾಲೂಕುಉಪಾಧ್ಯಕ್ಷರಾಗಿ ಸುರೇಶ ಮಡಿವಾಳ, ತಾಲೂಕು ಕಾನೂನು ಸಲಹೆಗಾರರಾಗಿಅಮರೇಶ ಪಾಟೀಲ್ ಹೊನ್ನಳ್ಳಿ, ತಾಲೂಕು ವಕ್ತರರಾಗಿ ಶರಣಬಸವ ಹಡಪದ ಈಚನಾಳ, ಎಸ್‍ಸಿ, ಎಸ್‍ಟಿ ಘಟಕದ ಅಧ್ಯಕ್ಷರಾಗಿ ಮಹಾದೇವಪ್ಪ ಸರ್ಜಾಪುರ, ಆರೋಗ್ಯ ಘಟಕದ ಅಧ್ಯಕ್ಷರಾಗಿ ಕುಮಾರಸ್ವಾಮಿ ಕಸಬಾಲಿಂಗಸುಗೂರು ಇವರನ್ನುಆಯ್ಕೆ ಮಾಡಿ ನಾಡಿನ ನೆಲ-ಜಲ ಪರಿಸರ ಸಂರಕ್ಷಣೆಜೊತೆಗೆ ಸಮಾಜಿಕ ಕಳಕಳಿಯೊಂದಿಗೆ ಕಾನೂನಿನ ಚೌಕಟ್ಟಿನಲ್ಲಿ ಸಮಾಜಮುಖಿ ಕೆಲಸ ಕಾರ್ಯಗಳನ್ನು ನಿರ್ವಹಿಸುವಂತೆ ಸೂಚಿಸಲಾಗಿದೆ.

Comments are closed.

Don`t copy text!